
ಬೆಂಗಳೂರು-ಮುಂಬೈ ಮಾರ್ಗದಲ್ಲಿ 16 ಬೋಗಿಗಳ ವಂದೇ ಭಾರತ್ ಸ್ಲೀಪರ್ ರೈಲು ಸಂಚಾರಕ್ಕೆ ನೈಋತ್ಯ ರೈಲ್ವೆ ಸಜ್ಜಾಗಿದ್ದು, ಶೀಘ್ರವೇ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ನಡೆಯಲಿದೆ.
ಈ ರೈಲು ಸುಮಾರು 16 ಗಂಟೆಯಲ್ಲಿ ಮುಂಬೈ ತಲುಪಲಿದ್ದು, 3ಎಸಿ ಬೋಗಿಯಲ್ಲಿ ಊಟದೊಂದಿಗೆ ಪ್ರಯಾಣಿಸಲು 3,000 ರೂಪಾಯಿ ಟಿಕೆಟ್ ದರ ನಿಗದಿಪಡಿಸುವ ಸಾಧ್ಯತೆಯಿದೆ.
ಬೆಂಗಳೂರಿನ BEML ಕಂಪನಿ ತಯಾರಿಸಿರುವ ಈ ರೈಲಿನಲ್ಲಿ 11 3ಎಸಿ, ನಾಲ್ಕು 2ಎಸಿ ಮತ್ತು ಒಂದು 1ಎಸಿ ಬೋಗಿಗಳಿದ್ದು, ತಾಂತ್ರಿಕ ಪರೀಕ್ಷೆಗಳ ನಂತರ ವಾಣಿಜ್ಯ ಸಂಚಾರ ಆರಂಭವಾಗಲಿದೆ.