
ಮೈಸೂರು ದಸರಾ ಆಚರಣೆ ಹಾಗೂ ಅರಮನೆ ಸಂಪ್ರದಾಯಗಳ ವಿವಾದದ ಕುರಿತು ಸುದ್ದಿಗೋಷ್ಠಿ ನಡೆಸಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸ್ಪಷ್ಟನೆ ನೀಡಿದ್ದಾರೆ.
ಅಂಬಾರಿ ಹಾಗೂ ಸಿಂಹಾಸನವು ಅರಮನೆ ಸ್ವಾಧೀನ ಕಾಯ್ದೆಗೆ ಒಳಪಡದ ಸಂಪೂರ್ಣ ಖಾಸಗಿ ಸ್ವತ್ತಾಗಿದ್ದು, ಹಿಂದೆಯೂ ತಮ್ಮ ಸುಪರ್ದಿಯಲ್ಲೇ ಇತ್ತು ಎಂದು ತಿಳಿಸಿದ್ದಾರೆ.
30 ದಿನಗಳಲ್ಲಿ ಅರಮನೆ ಮರಳಿಸಲು ಕೋರ್ಟ್ ಆದೇಶಿಸಿದ್ದರೂ ಸರ್ಕಾರ ಅದನ್ನು ಜಾರಿಗೆ ತಂದಿಲ್ಲ ಎಂದು ಅವರು ಆರೋಪಿಸಿದ್ದಾರೆ.