
ಗ್ಲ್ಯಾಸ್ಗೋದಲ್ಲಿ ನಡೆದ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪಾಕಿಸ್ತಾನ ಕೇವಲ ಒಂದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡು 36ನೇ ಸ್ಥಾನ ಪಡೆದಿದೆ.
ಮಹಿಳಾ ಬಾಕ್ಸರ್ ಫಾತಿಮಾ ಜಹ್ರಾ 60ಕೆಜಿ ವಿಭಾಗದಲ್ಲಿ ಕಂಚು ಗೆದ್ದು ಪಾಕಿಸ್ತಾನದ ಮಾನ ಉಳಿಸಿದರೆ, ಒಲಿಂಪಿಕ್ಸ್ ಚಾಂಪಿಯನ್ ಅರ್ಷದ್ ನದೀಮ್ ಜಾವೆಲಿನ್ ಥ್ರೋನಲ್ಲಿ 9ನೇ ಸ್ಥಾನ ಪಡೆದರು.
ಈ ಕ್ರೀಡಾಕೂಟದಲ್ಲಿ 39 ಪದಕಗಳೊಂದಿಗೆ ಭಾರತ 4ನೇ ಸ್ಥಾನ ಗಳಿಸಿದ್ದು, ಪಾಕಿಸ್ತಾನದ ಈ ಪ್ರದರ್ಶನ ಕಳೆದ 36 ವರ್ಷಗಳಲ್ಲೇ ಅತ್ಯಂತ ಕಳಪೆಯಾಗಿದೆ.