
ಬಿಗ್ ಬಾಸ್ ಕನ್ನಡ ಸೀಸನ್ 13 ಶೋಗೆ ಅಗ್ನಿ ಪರೀಕ್ಷೆ ಮೂಲಕ ಕಾಮನರ್ ಆಗಿ ಪ್ರವೇಶ ಪಡೆದಿರುವ ಮಂಜು ಮೊದಲ ವಾರವೇ ಭಾರೀ ಸದ್ದು ಮಾಡಿದ್ದಾರೆ.
ಒಂದು ವಾರ ಕಳೆಯುವುದರೊಳಗೆ ಮಂಜು ಚಿಂದಿ, ಚಿತ್ರನ್ನ ಕಾಮಿಡಿ ಪೀಸ್ ಆಗಲಿದ್ದಾರೆ ಎಂದು ಸ್ಪರ್ಧಿ ತಾಂಡವ್ ರಾಮ್ ಗಗನ್ ಚಿನ್ನಪ್ಪ ಜೊತೆ ಚರ್ಚೆ ನಡೆಸಿದ್ದಾರೆ.
ಕಿಚ್ಚ ಸುದೀಪ್ ಅವರು ನಡೆಸಿಕೊಡಲಿರುವ ವಾರಾಂತ್ಯದ ಸಂಚಿಕೆಯನ್ನು ವೀಕ್ಷಕರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.