
ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಲು 'ಅನ್ನಸೇವೆ' ಮೊಬೈಲ್ ಆ್ಯಪ್ ನಾಳೆಯಿಂದ ಗೂಗಲ್ ಪ್ಲೇ-ಸ್ಟೋರ್ನಲ್ಲಿ ಲಭ್ಯವಾಗಲಿದೆ.
ಫಲಾನುಭವಿಗಳು ತಮ್ಮ ಮೊಬೈಲ್ ಮೂಲಕವೇ ಯುಐಡಿಎಐನ ಫೇಸ್ ಅಥೆಂಟಿಕೇಶನ್ ತಂತ್ರಜ್ಞಾನ ಬಳಸಿ ಸ್ವತಃ ಇ-ಕೆವೈಸಿ ಪೂರ್ಣಗೊಳಿಸಬಹುದು.
ಒಂದು ವರ್ಷದ ಹಿಂದೆ ಇ-ಕೆವೈಸಿ ಮಾಡಿಸಿದವರು ಸಹ ಕಡ್ಡಾಯವಾಗಿ ಮತ್ತೊಮ್ಮೆ ಪೂರ್ಣಗೊಳಿಸಬೇಕು ಎಂದು ಇಲಾಖೆ ಸೂಚಿಸಿದ್ದು, ಅಕ್ಟೋಬರ್ 20 ಅಂತಿಮ ದಿನಾಂಕವಾಗಿದೆ.