Health & Environment
ಪಾಕಿಸ್ತಾನದ ಬ್ರಾಡ್ ಶಿಖರದಲ್ಲಿ ಹಿಮಪಾತ: 10 ಪರ್ವತಾರೋಹಿಗಳು ನಾಪತ್ತೆ

ಪಾಕಿಸ್ತಾನದ ಬ್ರಾಡ್ ಶಿಖರದಲ್ಲಿ ಹಿಮಪಾತ: 10 ಪರ್ವತಾರೋಹಿಗಳು ನಾಪತ್ತೆ

prajavani5h
THE BRIEF
1

ಪಾಕಿಸ್ತಾನದ ಕಾರಕೋರಂ ಶ್ರೇಣಿಯಲ್ಲಿರುವ 8,051 ಮೀಟರ್ ಎತ್ತರದ ಬ್ರಾಡ್ ಶಿಖರದಲ್ಲಿ ಸಂಭವಿಸಿದ ಹಿಮಪಾತದಲ್ಲಿ ನೇಪಾಳದ ನಿರ್ಮಲ್ ಪುರ್ಜಾ ಸೇರಿದಂತೆ ಒಟ್ಟು 10 ಪರ್ವತಾರೋಹಿಗಳು ಕಾಣೆಯಾಗಿದ್ದಾರೆ.

2

ಗುರುವಾರ ಮುಂಜಾನೆ 9 ಗಂಟೆಗೆ 7,000 ಮೀಟರ್ ಎತ್ತರದಲ್ಲಿ ಈ ದುರ್ಘಟನೆ ನಡೆದಿದ್ದು, ನಾಪತ್ತೆಯಾದವರಲ್ಲಿ ನೇಪಾಳದ ಐವರು ಹಾಗೂ ಇತರ ದೇಶಗಳ ಐವರು ಪರ್ವತಾರೋಹಿಗಳು ಸೇರಿದ್ದಾರೆ.

3

ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, 14 ಶಿಖರಗಳನ್ನು 189 ದಿನಗಳಲ್ಲಿ ಏರಿ ದಾಖಲೆ ಮಾಡಿದ್ದ ನಿರ್ಮಲ್ ಪುರ್ಜಾ ಅವರೂ ಈ ತಂಡದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.