
ಐಸಿಸಿ ಪುರುಷರ ಟಿ20 ವಿಶ್ವಕಪ್ ಏಷ್ಯಾ ಸಬ್ ರೀಜನಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಮಂಗೋಲಿಯಾ ವಿರುದ್ಧ ಕುವೈತ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಮಂಗೋಲಿಯಾ 14.5 ಓವರ್ಗಳಲ್ಲಿ ಕೇವಲ 42 ರನ್ಗಳಿಗೆ ಆಲೌಟ್ ಆಗಿದ್ದು, ಕುವೈತ್ ಪರ ನಾಯಕ ಮೊಹಮ್ಮದ್ ಅಸ್ಲಂ 19 ನೀಡಿ 5 ವಿಕೆಟ್ ಪಡೆದರು.
ಸುಲಭ ಗುರಿಯನ್ನು ಬೆನ್ನಟ್ಟಿದ ಕುವೈತ್ ಕೇವಲ 3.3 ಓವರ್ಗಳಲ್ಲಿ (21 ಎಸೆತಗಳಲ್ಲಿ) ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.