
ಗ್ರಾಮ ಆಡಳಿತಾಧಿಕಾರಿ (VAO) ಪರೀಕ್ಷೆಯಲ್ಲಿ ಅಕ್ರಮ ಎಸಗಿ 151 ಅಂಕ ಗಳಿಸಿ ಮೊದಲ ರ್ಯಾಂಕ್ ಪಡೆದ ಆರೋಪದ ಮೇಲೆ ಹಾವೇರಿಯ ಶಂಕರ್ ಬನ್ನೂರು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕ ಪಡೆದಿದ್ದ ಶಂಕರ್, ವಿಎಒ ಪರೀಕ್ಷೆಯಲ್ಲಿ ಮೊಬೈಲ್ ಬಳಸಿ ನಕಲು ಮಾಡಿರುವುದು ಹಾವೇರಿ ಜಿಲ್ಲಾಧಿಕಾರಿ ನಡೆಸಿದ ತನಿಖೆಯಲ್ಲಿ ಪತ್ತೆಯಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸೂಚನೆ ಮೇರೆಗೆ ಸವಣೂರು ಎಸಿ ಸಮೀರ ಖೋಡೆ ಅವರು ಶಿಗ್ಗಾಂವ್ ಪೊಲೀಸ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಮತ್ತು ಕರ್ನಾಟಕ ಪರೀಕ್ಷಾ ಕಾಯ್ದೆ 2023 ಅಡಿ ಎಫ್ಐಆರ್ ದಾಖಲಿಸಿದ್ದಾರೆ.