
ಅಮೆರಿಕದ ಟೆಕ್ಸಾಸ್ನಲ್ಲಿ ನೆಲೆಸಿರುವ ಭಾರತೀಯ ಮೂಲದ ಅಣ್ಣ-ತಂಗಿಯಾದ ರೋಹನ್ ಸತೀಜಾ ಹಾಗೂ ಅನ್ಯಾ ಸತೀಜಾ ಅವರು 2018ರಲ್ಲಿ ನಿಂಬೆಹಣ್ಣಿನ ಶರಬತ್ತು ಮತ್ತು ಬಿಸ್ಕತ್ ಮಾರಿ 'ಲೆಟ್ಸ್ ಲರ್ನ್ ಫೌಂಡೇಶನ್' ಆರಂಭಿಸಿದರು.
ಈ ಸಂಸ್ಥೆಯ ಮೂಲಕ ಇದುವರೆಗೆ ಟೆಕ್ಸಾಸ್ನಾದ್ಯಂತ 1 ಲಕ್ಷ ಪುಸ್ತಕಗಳು, 1.25 ಲಕ್ಷ ಕಲಿಕಾ ಸಾಮಗ್ರಿಗಳು ಹಾಗೂ ಮಾನಸಿಕ ಆರೋಗ್ಯ ಕಿಟ್ಗಳನ್ನು ವಿತರಿಸಿ 15,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೆರವಾಗಿದ್ದಾರೆ.
ಸ್ಕೊಲಾಸ್ಟಿಕ್ ಹಾಗೂ ಲೇಡಿ ಗಾಗಾ ಅವರ ಬಾರ್ನ್ ದಿಸ್ ವೇ ಫೌಂಡೇಶನ್ನಂತಹ ರಾಷ್ಟ್ರೀಯ ಸಂಸ್ಥೆಗಳು ಇವರಿಗೆ ಆರ್ಥಿಕ ನೆರವು ಹಾಗೂ ಪುಸ್ತಕಗಳನ್ನು ಒದಗಿಸಿ ಬೆಂಬಲಿಸಿವೆ.