
'ಬಿಗ್ ಬಾಸ್ ಕನ್ನಡ ಸೀಸನ್ 13' ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿ ನೀಡಿರುವ ಸೋನಿಕಾ ಮತ್ತು ಗಾನವಿ ನಡುವೆ ತೀವ್ರ ಜಟಾಪಟಿ ನಡೆದಿದೆ.
ಸೆಪ್ಟೆಂಬರ್ 30ರ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು, ಪರಸ್ಪರ ಏರುಧ್ವನಿಯಲ್ಲಿ ಬೈದಾಡಿಕೊಂಡಿದ್ದಾರೆ.
ಗಾನವಿ ಅವರ ಆಟ ಹಾಗೂ ವರ್ತನೆಯ ಬಗ್ಗೆ ಸೌಂದರ್ಯಾ ಶೆಟ್ಟಿ ಮತ್ತು ಗಗನ್ ಸೇರಿದಂತೆ ಇತರ ಸ್ಪರ್ಧಿಗಳು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ.