
ವಿಜಯಪುರದ ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕ್ ಲಿಮಿಟೆಡ್ ಕಿರಿಯ ವ್ಯವಸ್ಥಾಪಕರು, ಅಟೆಂಡರ್ ಮತ್ತು ವಾಚ್ಮ್ಯಾನ್ ಸೇರಿದಂತೆ ಒಟ್ಟು 60 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು 14,550 ರಿಂದ 43,200 ರೂ. ವೇತನ ಶ್ರೇಣಿಯನ್ನು ಪಡೆಯಲಿದ್ದು, ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಮೆರಿಟ್ ಆಧಾರದ ಮೇಲೆ ನೇರ ನೇಮಕಾತಿ ನಡೆಯಲಿದೆ.
ಆಸಕ್ತರು ಸೆಪ್ಟೆಂಬರ್ 15ರೊಳಗೆ ಬ್ಯಾಂಕಿನ ಅಧಿಕೃತ ವೆಬ್ಸೈಟ್ ssbankvijaypur.com ಮೂಲಕ ಅರ್ಜಿ ಸಲ್ಲಿಸಬೇಕು, ಸಾಮಾನ್ಯ ವರ್ಗಕ್ಕೆ 1200 ರೂ. ಶುಲ್ಕ ನಿಗದಿಪಡಿಸಲಾಗಿದೆ.