
ಕೆಪಿಎಸ್‌ಸಿಯನ್ನು ಶಾಸನಬದ್ಧವಾಗಿ ಮುಚ್ಚುತ್ತೇವೆ ಎಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಹೇಳಿಕೆ ಹತಾಶೆ, ಹೊಣೆಗೇಡಿತನ ಹಾಗೂ ಅಜ್ಞಾನದ ಪರಮಾವಧಿಯಾಗಿದೆ ಎಂದು ಟೀಕಿಸಿರುವ ಅವರು, ತಪ್ಪಿತಸ್ಥರನ್ನು ಬಿಟ್ಟು ಸಂಸ್ಥೆಯನ್ನೇ ಮುಚ್ಚುವುದರಲ್ಲಿ ಅರ್ಥವಿಲ್ಲ ಎಂದಿದ್ದಾರೆ.
ಕೆಪಿಎಸ್‌ಸಿಯಲ್ಲಿ ಕೆಟ್ಟ ಜನ ಕುಳಿತಿದ್ದಾರೆ ಹೊರತು ಸಂಸ್ಥೆ ಚೆನ್ನಾಗಿಯೇ ಇದೆ ಎಂದ ಅವರು, ವಿಧಾನಸೌಧದ 3ನೇ ಮಹಡಿಯಲ್ಲಿ ಕೂತವರೇ ಅಕ್ರಮಗಳಿಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.