
ಕೆಪಿಎಸ್‌ಸಿ ಆಯೋಗದ ನೇಮಕಾತಿಗಳಲ್ಲಿ ನಡೆಯುತ್ತಿರುವ ಹಗರಣ ಹಾಗೂ ಅಕ್ರಮಗಳಿಂದಾಗಿ ಸರ್ಕಾರವು ಬಹುಪಾಲು ನೇಮಕಾತಿ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಿದೆ.
33 ವಿವಿಧ ಸರ್ಕಾರಿ ಇಲಾಖೆಗಳ 5,341 ಹುದ್ದೆಗಳ ಭರ್ತಿ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ವಹಿಸಲಾಗಿದೆ.
ಪಾರದರ್ಶಕತೆ ಕಾಪಾಡುವ ಮತ್ತು ಅಭ್ಯರ್ಥಿಗಳ ವಿಶ್ವಾಸ ಮರಳಿ ಗಳಿಸುವ ಉದ್ದೇಶದಿಂದ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.