
ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ವೇಗಳಲ್ಲಿ ಸ್ಪೀಡ್ ಕ್ಯಾಮೆರಾಗಳ ಮೂಲಕ ವಿಧಿಸಲಾಗುತ್ತಿದ್ದ ದಂಡದ ಭಯದಿಂದ ಸವಾರರಿಗೆ ಕೇಂದ್ರ ಸರ್ಕಾರ ಮುಕ್ತಿ ನೀಡಿದೆ.
ಹೊಸ ಮಾರ್ಗಸೂಚಿಯ ಪ್ರಕಾರ ಗರಿಷ್ಠ ವೇಗದ ಮಿತಿಗಿಂತ ಶೇಕಡಾ 20ರಷ್ಟು ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೂ ದಂಡ ವಿಧಿಸದಂತೆ ಸೂಚಿಸಲಾಗಿದೆ.
ಉದಾಹರಣೆಗೆ 100 ಕಿ.ಮೀ ವೇಗದ ಮಿತಿ ಇರುವ ರಸ್ತೆಯಲ್ಲಿ 120 ಕಿ.ಮೀ ವರೆಗೆ ಚಲಾಯಿಸಿದರೆ ಯಾವುದೇ ದಂಡ ಬೀಳುವುದಿಲ್ಲ ಎಂದು ತಿಳಿಸಲಾಗಿದೆ.