
ಭಾರತೀಯ ಕ್ರಿಕೆಟ್‌ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಪ್ರತಿಭೆ ಮತ್ತು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಕುರಿತು ವಿಶ್ವಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಅಗಾಧ ಪ್ರತಿಭೆಯೊಂದಿಗೆ ಬಂದು ನಂತರ ಮರೆಯಾದ ವಿನೋದ್ ಕಾಂಬ್ಳಿ ಅವರ ವೃತ್ತಿಜೀವನವನ್ನು ಉದಾಹರಣೆಯಾಗಿರಿಸಿದ ಕಪಿಲ್ ದೇವ್, ವೈಭವ್ ಅವರನ್ನು ಈಗಲೇ ಸೂಪರ್‌ಸ್ಟಾರ್ ಎಂದು ಬಿಂಬಿಸುವುದು ಸರಿಯಲ್ಲ ಎಂದಿದ್ದಾರೆ.
ಕೇವಲ ಇಂದಿನ ಪ್ರದರ್ಶನಕ್ಕಿಂತ ಮುಂಬರುವ 2-3 ವರ್ಷಗಳಲ್ಲಿ ವೈಭವ್ ತಮ್ಮ ಜೀವನಶೈಲಿ, ಮನೋಭಾವ ಮತ್ತು ಶಿಸ್ತನ್ನು ಹೇಗೆ ಕಾಯ್ದುಕೊಳ್ಳುತ್ತಾರೆ ಎಂಬುದು ಅವರ ಕ್ರೀಡಾ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.