
ಆಗಸ್ಟ್ 2023ರಿಂದ ಆಗಸ್ಟ್ 2026ರ ಅವಧಿಯಲ್ಲಿ ಮಲ್ಟಿ-ಅಸೆಟ್ ಫಂಡ್ಗಳ ಎಯುಎಂ 35,000 ಕೋಟಿ ರೂಪಾಯಿಗಳಿಂದ 2.07 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ಇದೇ ಅವಧಿಯಲ್ಲಿ ಈ ಫಂಡ್ಗಳಲ್ಲಿ ಹೂಡಿಕೆ ಮಾಡಿದ ಫೋಲಿಯೋಗಳ ಸಂಖ್ಯೆ 7.35 ಲಕ್ಷದಿಂದ 60.18 ಲಕ್ಷಕ್ಕೆ ಜಿಗಿದಿದೆ.
ಚಿನ್ನ ಮತ್ತು ಬೆಳ್ಳಿಯ ಉತ್ತಮ ರಿಟರ್ನ್ಸ್ ಹಾಗೂ ಒಂದೇ ಯೋಜನೆಯಲ್ಲಿ ಬಹು ಆಯ್ಕೆ ಸಿಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.