
ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಅವರು ಶಾಸಕರಿಗೆ ಗೌರವ ನೀಡುತ್ತಿಲ್ಲ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮತ್ತೊಮ್ಮೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಯಾದವರು ಪಕ್ಷಾತೀತವಾಗಿ ಎಲ್ಲಾ ಶಾಸಕರಿಗೆ ತಾವೇ ಸ್ವತಃ ಫೋನ್ ಮಾಡಬೇಕು ಆದರೆ ಗುಮಾಸ್ತರಿಂದ ಫೋನ್ ಮಾಡಿಸುತ್ತಾರೆ ಎಂದು ಅವರು ಟೀಕಿಸಿದ್ದಾರೆ.
ಕನಿಷ್ಠ ಪಕ್ಷ ಆಸ್ಪತ್ರೆಯ ವಿಷಯದಲ್ಲಾದರೂ ಜಿಲ್ಲಾಧಿಕಾರಿಗಳು ಎಂಎಲ್ಎ ಮತ್ತು ಎಂಎಲ್ಸಿಗಳಿಗೆ ಕರೆ ಮಾಡಬೇಕು ಎಂದು ರೇವಣ್ಣ ಆಗ್ರಹಿಸಿದ್ದಾರೆ.