
ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ ವೀಕ್ಷಕರ ವೋಟಿಂಗ್ ಲೆಕ್ಕಾಚಾರದಲ್ಲಿ ಹಿನ್ನಡೆ ಅನುಭವಿಸಿ ಸ್ಪರ್ಧಿ ಲಿಖಿತ್ ಎಲಿಮಿನೇಟ್ ಆಗಿ ಹೊರಬಿದ್ದಿದ್ದಾರೆ.
ಕಳೆದ ವಾರ ನಾಮಿನೇಟ್ ಆಗಿದ್ದ ಕಿರಣ್, ಧನುಷ್, ಮಂಜು, ಸಂಗೀತಾ, ಯಶಸ್ ಮತ್ತು ಲಿಖಿತ್ ಅವರ ಪೈಕಿ ಲಿಖಿತ್ ಕನಿಷ್ಠ ವೋಟ್ ಪಡೆದಿದ್ದಾರೆ.
ಮನೆಯಲ್ಲಿದ್ದ ತಮ್ಮ ಸಿಟ್ಟಿನ ಸ್ವಭಾವವೇ ತಮ್ಮ ಅಕಾಲಿಕ ನಿರ್ಗಮನಕ್ಕೆ ಕಾರಣ ಎಂದು ವೇದಿಕೆ ಮೇಲೆ ಸುದೀಪ್ ಜೊತೆ ಮಾತನಾಡಿದ ಲಿಖಿತ್ ತಪ್ಪನ್ನು ಒಪ್ಪಿಕೊಂಡಿದ್ದಾರೆ.