
ಪಾಕಿಸ್ತಾನದ ಖೈಬರ್‌ಪಂಖ್ತುಖ್ವಾ ಪ್ರಾಂತ್ಯದ ಸ್ವಾತ್ ಜಿಲ್ಲೆಯಲ್ಲಿ ಭಾನುವಾರ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿದ್ದಾರೆ.
ಸ್ವಾತ್ ಅಮನ್ ಜಿರ್ಗಾ ಎಂಬ ಬುಡಕಟ್ಟು ಪರಿಷತ್ತು ಆಯೋಜಿಸಿದ್ದ ಶಾಂತಿ ಮೆರವಣಿಗೆ ನಡೆಯುತ್ತಿದ್ದ ವೇಳೆ ಕಬಾಲ್ ಪಟ್ಟಣದ ಪೊಲೀಸ್ ಠಾಣೆಯ ಮೇಲೆ ಈ ದಾಳಿ ನಡೆದಿದೆ.
ಈ ಭೀಕರ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಅಥವಾ ವ್ಯಕ್ತಿ ಹೊತ್ತುಕೊಂಡಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.