
ಬೆಂಗಳೂರಿನ ಮಲ್ಲತಹಳ್ಳಿಯ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸೇಂಟ್ ಸೋಫಿಯಾ ಹೈಸ್ಕೂಲ್ ಮುಂಭಾಗ ರಸ್ತೆ ಕುಸಿದು ಆರು ಅಡಿ ಆಳದ ಬೃಹತ್ ಹೊಂಡ ಸೃಷ್ಟಿಯಾಗಿದೆ.
ಕಳಪೆ ಕಾಮಗಾರಿಯೇ ರಸ್ತೆ ಕುಸಿತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ಇದು ಕೇವಲ ಗುಂಡಿಯಲ್ಲದೆ ಬೃಹತ್ ಗುಹೆಯಂತೆ ಕಾಣಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಕೆಳಗೆ ಮಣ್ಣಿಲ್ಲದೆ ಕೇವಲ ಡಾಂಬರ್ ಮಾತ್ರ ಉಳಿದಿರುವುದು ಅಪಾಯದ ಸೂಚನೆಯಾಗಿದೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.