
ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಕನ್ನಡ ಶಿಕ್ಷಕರಿಗೆ ಅವಕಾಶ ನೀಡದೆ ಸಮಾಜ ವಿಜ್ಞಾನ ಶಿಕ್ಷಕರಿಂದ ಕನ್ನಡ ಬೋಧಿಸಲು ನಿರ್ಧರಿಸಿರುವುದಕ್ಕೆ ಕರವೇ ವಿರೋಧ ವ್ಯಕ್ತಪಡಿಸಿದೆ.
ಕನ್ನಡ ಐಚ್ಛಿಕ ವಿಷಯದಲ್ಲಿ ಪದವಿ ಮತ್ತು ಬಿ.ಎಡ್ ಮುಗಿಸಿರುವ ಲಕ್ಷಾಂತರ ಅಭ್ಯರ್ಥಿಗಳು ಈ ಆದೇಶದಿಂದ ಉದ್ಯೋಗ ಅವಕಾಶ ಕಳೆದುಕೊಳ್ಳುತ್ತಿದ್ದಾರೆ ಎಂದು ನಾರಾಯಣಗೌಡ ಟಿ.ಎ ಆರೋಪಿಸಿದ್ದಾರೆ.
ಸರ್ಕಾರ ಕೂಡಲೇ ಈ ಕನ್ನಡ ವಿರೋಧಿ ಆದೇಶವನ್ನು ಹಿಂಪಡೆದು, ಕನ್ನಡ ವಿಷಯಕ್ಕೆ ಪ್ರತ್ಯೇಕ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಕರವೇ ಆಗ್ರಹಿಸಿದೆ.