
ಪುಣೆಯ ಉದ್ಯಮಿ ನಿತಿನ್ ಶರ್ಮಾ ಅವರು ನೀರಿಲ್ಲದೆ ಕಾರು ತೊಳೆಯುವ ಸಾವಯವ ದ್ರಾವಣವನ್ನು ಅಭಿವೃದ್ಧಿಪಡಿಸಿ, 10 ಲಕ್ಷ ರೂ. ಹೂಡಿಕೆಯನ್ನು 10 ಕೋಟಿ ರೂ. ವಹಿವಾಟಾಗಿ ಬೆಳೆಸಿದ್ದಾರೆ.
ಈ ಸ್ಟಾರ್ಟಪ್ ಮೂಲಕ ಪ್ರತಿದಿನ ಸುಮಾರು 12 ಲಕ್ಷ ಲೀಟರ್ ನೀರು ಉಳಿತಾಯವಾಗುತ್ತಿದ್ದು, 22 ರಾಜ್ಯಗಳಲ್ಲಿ 200ಕ್ಕೂ ಹೆಚ್ಚು ಫ್ರಾಂಚೈಸಿಗಳು ಕಾರ್ಯನಿರ್ವಹಿಸುತ್ತಿವೆ.
2019ರಲ್ಲಿ ಅಭಿವೃದ್ಧಿಪಡಿಸಿದ ಈ ಸಸ್ಯ ಆಧಾರಿತ ದ್ರಾವಣವು ಕಾರಿನ ಬಣ್ಣವನ್ನು ರಕ್ಷಿಸುವುದರ ಜೊತೆಗೆ ನೀರಿನ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ.