
ಕರ್ನಾಟಕದ ಸರ್ಕಾರಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯ ವಿದ್ಯಾರ್ಥಿ ವೇತನ ಪೋರ್ಟಲ್ ಗುರುತಿನ ಸಂಖ್ಯೆ (SSP ID) ಕಡ್ಡಾಯಗೊಳಿಸಲಾಗಿದೆ.
ವಿದ್ಯಾರ್ಥಿವೇತನ, ಸೈಕಲ್, ಸಮವಸ್ತ್ರ ಮತ್ತು ಬಿಸಿಯೂಟದಂತಹ ಸರ್ಕಾರದ ವಿವಿಧ ಸೌಲಭ್ಯಗಳನ್ನು ನೇರ ನಗದು ವರ್ಗಾವಣೆ ಮೂಲಕ ಒದಗಿಸಲು ಈ ಐಡಿ ಕಡ್ಡಾಯವಾಗಿದೆ ಎಂದು ಸಮಗ್ರ ಶಿಕ್ಷಣ ಕರ್ನಾಟಕ ತಿಳಿಸಿದೆ.
ಐಡಿ ಹೊಂದಿರದ ಅಥವಾ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆಧಾರ್ ವಿವರಗಳನ್ನು ನೀಡಿ ಹೊಸದಾಗಿ ಎಸ್ಎಸ್‌ಪಿ ಐಡಿ ಹಾಗೂ ಪಾಸ್‌ವರ್ಡ್ ಸೃಷ್ಟಿಸಿಕೊಳ್ಳುವಂತೆ ಸೂಚಿಸಲಾಗಿದೆ.