
ಹೈದರಾಬಾದ್‌ನ 10ನೇ ತರಗತಿ ವಿದ್ಯಾರ್ಥಿ ಭುವನೇಶ್ ತನ್ನ ತಾಯಿಯ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಮಿನಿ ರೋಪ್‌ವೇ ರೋಬೋಟ್ ಒಂದನ್ನು ನಿರ್ಮಿಸಿ ಅಚ್ಚರಿ ಮೂಡಿಸಿದ್ದಾರೆ.
ಮನೆಯಲ್ಲಿ ಲಭ್ಯವಿದ್ದ ಆರ್ಡುನೊ ಯುನೊ (Arduino Uno), ಇನ್‌ಫ್ರಾರೆಡ್ ಸೆನ್ಸಾರ್ ಮತ್ತು ರೇಡಿಯೋ ಫ್ರೀಕ್ವೆನ್ಸಿ ಮಾಡ್ಯೂಲ್ ಅನ್ನು ಈ ಆವಿಷ್ಕಾರಕ್ಕಾಗಿ ಬಾಲಕ ಬಳಸಿಕೊಂಡಿದ್ದಾನೆ.
ಸೆನ್ಸಾರ್ ಚಲನೆಯನ್ನು ಗ್ರಹಿಸಿದಾಗ ಹಗ್ಗದ ಮೇಲೆ ಚಲಿಸುವ ರೋಬೋಟ್ ನೇರವಾಗಿ ಹುಟ್ಟುಹಬ್ಬದ ಶುಭಾಶಯ ಪತ್ರವನ್ನು ತಾಯಿಗೆ ತಲುಪಿಸುತ್ತಿದ್ದು, ಈ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.