
ಭಾರತ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ ಪಾಡ್ಕಾಸ್ಟ್ ಒಂದರಲ್ಲಿ ತಾವು ಅನುಸರಿಸುವ 30 ನಿಮಿಷಗಳ ನಿಯಮದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಆಟದಲ್ಲಿ ಅಥವಾ ಜೀವನದಲ್ಲಿ ಸೋಲಾದಾಗ ದುಃಖ ಅಥವಾ ನಿರಾಶೆಯನ್ನು ಅನುಭವಿಸಲು 30 ನಿಮಿಷಗಳು ಸಾಕು ಎಂದು ಅವರು ತಿಳಿಸಿದ್ದಾರೆ.
ಸಂಕಷ್ಟ ಎದುರಾದಾಗ ಅತಿಯಾದ ಅನುಕಂಪ ತೋರಿಸುವ ಬದಲು ಸ್ವಯಂ ಶಕ್ತಿಯಿಂದ ಎದ್ದು ನಿಲ್ಲಲು ಜಾಗ ನೀಡಬೇಕು ಎಂದು ಮಂಧಾನ ಅಭಿಪ್ರಾಯಪಟ್ಟಿದ್ದಾರೆ.