
ಬೆಂಗಳೂರಿನ ಕೆಜಿಎಸ್ ಕ್ಲಬ್‌ನಲ್ಲಿ ನಡೆದ 7ನೇ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯ 17 ವರ್ಷದೊಳಗಿನವರ ವಿಭಾಗದಲ್ಲಿ ಅಥರ್ವ ನವರಂಗೆ ಮತ್ತು ರಾಶಿ ವಿ ರಾವ್ ಪ್ರಶಸ್ತಿ ಜಯಿಸಿದ್ದಾರೆ.
ಅಥರ್ವ ನವರಂಗೆ ಫೈನಲ್‌ನಲ್ಲಿ ರೆಯಾಂಶ್ ಜಲಾನ್ ವಿರುದ್ಧ 9-11, 15-13, 11-3, 11-6 ಅಂಕಗಳಿಂದ ಗೆಲುವು ಸಾಧಿಸಿದರು.
15 ವರ್ಷದೊಳಗಿನವರ ವಿಭಾಗದಲ್ಲಿ ಎಂ.ಸಿದ್ಧಾಂತ್ ಬಾಲಕರ ವಿಭಾಗದಲ್ಲೂ ಮತ್ತು ಮಿಹಿಕಾ ಉಡುಪ ಬಾಲಕಿಯರ ವಿಭಾಗದಲ್ಲೂ ಚಾಂಪಿಯನ್ ಆಗಿ ಹೊರಹೊಮ್ಮಿದರು.