
ಕರ್ನಾಟಕ ಸರ್ಕಾರವು ಆಡಳಿತ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಲು ಆಂಥ್ರೋಪಿಕ್ ಸಂಸ್ಥೆಯೊಂದಿಗೆ ಸಹಭಾಗಿತ್ವಕ್ಕೆ ಮುಂದಾಗಿದೆ.
ನಿಪುಣ ಕಾರ್ಯಕ್ರಮದಡಿ ಆಂಥ್ರೋಪಿಕ್ನ ಕ್ಲಾಡ್ ಎಐ ಸರ್ಟಿಫಿಕೇಶನ್ ಕೋರ್ಸ್ಗಳನ್ನು ಪರಿಚಯಿಸಲು ಮತ್ತು ರಾಜ್ಯದ ಸ್ಟಾರ್ಟ್-ಅಪ್ಗಳಿಗೆ ತಾಂತ್ರಿಕ ಬೆಂಬಲ ನೀಡಲು ನಿರ್ಧರಿಸಲಾಗಿದೆ.
ಪರೀಕ್ಷಾ ಅಕ್ರಮ ತಡೆಗೆ ಮತ್ತು ಸರ್ಕಾರಿ ಡೇಟಾ ಸುರಕ್ಷತೆಗೆ ಎಐ ಬಳಸಲು ಇಲಾಖಾವಾರು ಕಾರ್ಯಪಡೆಗಳನ್ನು ರಚಿಸಲು ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಸಭೆಯಲ್ಲಿ ಚರ್ಚಿಸಲಾಗಿದೆ.