
ಒಲಿಂಪಿಕ್ಸ್ ಪದಕ ಗೆಲ್ಲುವ ಕನಸು ಕಂಡಿದ್ದ ಡೆಹ್ರಾಡೂನ್‌ನ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಕುಹೂ ಗಾರ್ಗ್, ಬೆನ್ನುನೋವು ಮತ್ತು ಕೋವಿಡ್‌ನಿಂದ ಕ್ರೀಡಾಬದುಕು ಅಡ್ಡಿಯಾದ ಬಳಿಕ ಸಿವಿಲ್ ಸರ್ವಿಸ್ ಕಡೆಗೆ ಮುಖಮಾಡಿದರು.
ಯುಪಿಎಸ್ಸಿ ಸಿಎಸ್‌ಇ 2023ರಲ್ಲಿ 178ನೇ ರ‍್ಯಾಂಕ್ ಪಡೆದು ಐಪಿಎಸ್ ಹುದ್ದೆಗೆ ಆಯ್ಕೆಯಾಗಿ ಗುಜರಾತ್ ಕೇಡರ್‌ಗೆ ನಿಯೋಜನೆಗೊಂಡರು.
ಹೈದರಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಅವರು, ಫೇಸ್-1 ತರಬೇತಿಯಲ್ಲಿ ಅತ್ಯುತ್ತಮ ಹೊರಾಂಗಣ ಪ್ರೊಬೇಷನರ್ ಆಗಿ ಪ್ರತಿಷ್ಠಿತ ಸ್ವೋರ್ಡ್ ಆಫ್ ಹಾನರ್ ಪ್ರಶಸ್ತಿಯನ್ನು ಪಡೆದಿದ್ದಾರೆ.