
ರಾಯ್‌ಪುರದ ಇಂದಿರಾ ಗಾಂಧಿ ಕೃಷಿ ವಿಶ್ವವಿದ್ಯಾಲಯವು ಆಗಸ್ಟ್ 7ರಂದು ನಡೆಸಿದ್ದ ಬಿಎಸ್‌ಸಿ ಪ್ರಥಮ ವರ್ಷದ ಸಸ್ಯ ರೋಗಶಾಸ್ತ್ರ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ರದ್ದುಗೊಳಿಸಿದೆ.
ಆಗಸ್ಟ್ 20ರಂದು ನಡೆದ ಕೀಟಶಾಸ್ತ್ರ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯ ವೇಳೆ ಈ ಅಕ್ರಮ ಬೆಳಕಿಗೆ ಬಂದಿದ್ದು, ಈ ಸಂಬಂಧ ಪ್ರೊಫೆಸರ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ರದ್ದುಗೊಂಡ ಸಸ್ಯ ರೋಗಶಾಸ್ತ್ರ ಮತ್ತು ಕೀಟಶಾಸ್ತ್ರ ಪರೀಕ್ಷೆಗಳನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮರುಪರೀಕ್ಷೆ ನಡೆಸಲು ವಿಶ್ವವಿದ್ಯಾಲಯದ ಕುಲಪತಿ ಡಾ. ಗಿರೀಶ್ ಚಾಂಡೇಲ್ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.