Economy
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಪಿಒ ಮೂಲಕ ₹94 ಸಾವಿರ ಕೋಟಿ ಸಂಗ್ರಹ

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಐಪಿಒ ಮೂಲಕ ₹94 ಸಾವಿರ ಕೋಟಿ ಸಂಗ್ರಹ

prajavani2h
THE BRIEF
1

ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಸಾರ್ವಜನಿಕರಿಗೆ ಷೇರು ಮಾರಾಟ ಮಾಡುವ ಮೂಲಕ ಪ್ರಮುಖ 78 ಕಂಪನಿಗಳು ₹94 ಸಾವಿರ ಕೋಟಿಗೂ ಹೆಚ್ಚು ಬಂಡವಾಳ ಸಂಗ್ರಹಿಸಿವೆ.

2

ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 65 ಕಂಪನಿಗಳು ಐಪಿಒ ಮೂಲಕ ₹69,533 ಕೋಟಿ ಸಂಗ್ರಹಿಸಿದ್ದು, ಪ್ರಸಕ್ತ ಸಾಲಿನಲ್ಲಿ ಬಂಡವಾಳ ಸಂಗ್ರಹವು ಶೇ. 35ರಷ್ಟು ಹೆಚ್ಚಳ ಕಂಡಿದೆ.

3

ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಐಪಿಒ ಹಾಗೂ ಮೂಲಸೌಕರ್ಯ ಟ್ರಸ್ಟ್‌ಗಳ ಮೊತ್ತವನ್ನು ಒಳಗೊಂಡಂತೆ ಒಟ್ಟಾರೆ ಬಂಡವಾಳ ಸಂಗ್ರಹವು ಶೇ. 75ರಷ್ಟು ಏರಿಕೆಯಾಗಿ ₹2.43 ಲಕ್ಷ ಕೋಟಿಗೆ ತಲುಪಿದೆ.