Health & Environment
ಗುಜರಾತ್‌ನಲ್ಲಿ ಚಂಡೀಪುರ ಸೋಂಕು ಉಲ್ಬಣ: 25 ಮಕ್ಕಳ ಸಾವು

ಗುಜರಾತ್‌ನಲ್ಲಿ ಚಂಡೀಪುರ ಸೋಂಕು ಉಲ್ಬಣ: 25 ಮಕ್ಕಳ ಸಾವು

prajavani3h
THE BRIEF
1

ಗುಜರಾತ್‌ನಲ್ಲಿ ಕಳೆದ ಎರಡು ತಿಂಗಳಲ್ಲಿ ಚಂಡೀಪುರ ವೆಸಿಕ್ಯೊಲೊವೈರಸ್ ಸೋಂಕಿಗೆ 25 ಮಕ್ಕಳು ಬಲಿಯಾಗಿದ್ದು, ರಾಜ್ಯದಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.

2

ಆಗಸ್ಟ್ 10ರ ವೇಳೆಗೆ ರಾಜ್ಯದಲ್ಲಿ ಒಟ್ಟು 225 ಶಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಅದರಲ್ಲಿ 39 ಪ್ರಕರಣಗಳು ಸಿಎಚ್‌ಪಿವಿ ಸೋಂಕು ಎಂದು ದೃಢಪಟ್ಟಿವೆ.

3

ಮರಳುನೊಣಗಳ ಕಡಿತದಿಂದ ಹರಡುವ ಈ ಸೋಂಕಿಗೆ ನಿರ್ದಿಷ್ಟ ಲಸಿಕೆ ಇಲ್ಲದ ಕಾರಣ, ರೋಗಲಕ್ಷಣಗಳ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ.