Indian Politics
ಮಾಲೂರು ನ್ಯಾಯಾಧೀಶರ ವರ್ತನೆಗೆ ಹೈಕೋರ್ಟ್ ತೀವ್ರ ಅಸಮಾಧಾನ

ಮಾಲೂರು ನ್ಯಾಯಾಧೀಶರ ವರ್ತನೆಗೆ ಹೈಕೋರ್ಟ್ ತೀವ್ರ ಅಸಮಾಧಾನ

tv9kannada1h
THE BRIEF
1

ಖಾಸಗಿ ಜಗಳದ ಹಿನ್ನೆಲೆಯಲ್ಲಿ ಬೈಕ್ ಸವಾರ, ಆತನ ತಾಯಿ ಮತ್ತು 69 ವರ್ಷದ ತಾತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಮಾಲೂರು ಜೆಎಂಎಫ್‌ಸಿ ನ್ಯಾಯಾಧೀಶೆ ಗಾಯತ್ರಿ ಅವರ ವರ್ತನೆಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

2

ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠವು, ನ್ಯಾಯಾಧೀಶರು ತಮ್ಮ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟು, ದಾಖಲಿಸಲಾದ ಎಫ್‌ಐಆರ್‌ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

3

ಮಾಲೂರು ನಗರದ ಕೆ.ಎಂ.ವಿನಯ್, ಕವಿತಾ ಮತ್ತು ವೆಂಕಟೇಶ್ ವಿರುದ್ಧ ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ನ್ಯಾಯಾಧೀಶರ ನಡವಳಿಕೆ ವಿಶ್ವಾಸ ಮೂಡಿಸುವಂತಿರಬೇಕು ಎಂದು ಎಚ್ಚರಿಸಿದೆ.