
ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಕನ್ನಡತಿ ನಿಕಿ ಪ್ರಸಾದ್, ತಮ್ಮ ಬೌಲಿಂಗ್ ವೃತ್ತಿಜೀವನದ ಮೊದಲ ಎರಡು ಎಸೆತಗಳಲ್ಲಿ ಸತತ ಎರಡು ವಿಕೆಟ್ ಕಬಳಿಸಿ ಐತಿಹಾಸಿಕ ವಿಶ್ವ ದಾಖಲೆ ನಿರ್ಮಿಸಿದರು.
ನಾಯಕಿ ಸ್ಮೃತಿ ಮಂಧಾನ ನೀಡಿದ ಬೌಲಿಂಗ್ ಅವಕಾಶವನ್ನು ಬಳಸಿಕೊಂಡ ನಿಕಿ ಪ್ರಸಾದ್, ಕೇವಲ 1 ರನ್ ನೀಡಿ ಜಿಂಬಾಬ್ವೆ ಆಟಗಾರ್ತಿಯರಾದ ಮುಗೆರಿ ಹಾಗೂ ನ್ಯಾಶಾ ಗ್ವಾಂಜುರಾ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ನಿಕಿ ಪ್ರಸಾದ್ಗೆ, ಎಲ್ ಬಿ ಡಬ್ಲ್ಯೂ ಕಾರಣದಿಂದ ಹ್ಯಾಟ್ರಿಕ್ ಸಾಧನೆ ಸ್ವಲ್ಪದರಲ್ಲೇ ತಪ್ಪಿತು.