
ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರವು ‘ಭಾರತ್ ರೈಸ್’ ಅನ್ನು ಹೆಚ್ಚುವರಿ ಹಂಚಿಕೆ ಮಾಡಿದ್ದು, 2027ರ ಜನವರಿ 31ರವರೆಗೆ ಅಕ್ಕಿ ಮತ್ತು ಭತ್ತದ ಮೇಲೆ ದಾಸ್ತಾನು ಮಿತಿ ವಿಧಿಸಲು ದಕ್ಷಿಣದ 5 ರಾಜ್ಯಗಳಿಗೆ ಅನುಮತಿ ನೀಡಲಾಗಿದೆ.
ದೇಶೀಯವಾಗಿ ಸಾಕಷ್ಟು ಪೂರೈಕೆ ಮತ್ತು ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (OMSS-D) ಅಡಿಯಲ್ಲಿ ಅಕ್ಕಿ ಮಾರಾಟದ ಗುರಿಯನ್ನು ಕೇಂದ್ರ ಸರ್ಕಾರವು 25 ಲಕ್ಷ ಮೆಟ್ರಿಕ್ ಟನ್‌ನಿಂದ 50 ಲಕ್ಷ ಮೆಟ್ರಿಕ್ ಟನ್ ವರೆಗೆ ದ್ವಿಗುಣಗೊಳಿಸಿದೆ.
ಎಲ್ಲಾ ಅಕ್ಕಿ ಸಂಗ್ರಹಣಾ ಸಂಸ್ಥೆಗಳು ಪ್ರತಿ ಶುಕ್ರವಾರ 'ಫುಡ್ ಸ್ಟಾಕ್ ಪೋರ್ಟಲ್'ನಲ್ಲಿ ದಾಸ್ತಾನು ವಿವರವನ್ನು ಕಡ್ಡಾಯವಾಗಿ ನವೀಕರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ ನೀಡಿದ್ದಾರೆ.