
2027ರಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯಲಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ಗೆ ನೈಜೀರಿಯಾ ತಂಡ ಅರ್ಹತೆ ಪಡೆದುಕೊಂಡಿದೆ.
ಅರ್ಹತಾ ಸುತ್ತಿನ ಪಂದ್ಯದಲ್ಲಿ ನೈಜೀರಿಯಾ ತಂಡವು ಜಿಂಬಾಬ್ವೆ ತಂಡವನ್ನು 4 ರನ್ಗಳಿಂದ ಸೋಲಿಸಿದ್ದು, ಪಂದ್ಯಾವಳಿಯಲ್ಲಿ ಒಂದೂ ಪಂದ್ಯ ಸೋಲದೆ ಈ ಸಾಧನೆ ಮಾಡಿದೆ.
ನೈಜೀರಿಯಾ ಪರ ಬೌಲಿಂಗ್ನಲ್ಲಿ ಉಸೇನ್ ಪೀಸ್ 3 ವಿಕೆಟ್ ಪಡೆದು ಮಿಂಚಿದರೆ, ಜಿಂಬಾಬ್ವೆ ಪರ ಸಲೇಮ್ ಮುಸೇಕಾ 27 ರನ್ ಗಳಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದರು.