
ಇಂಗ್ಲೆಂಡ್ನ ವೇಗದ ಬೌಲರ್ ಜಾನ್ ಟರ್ನರ್ ಸತತ ಗಾಯಗಳ ಕಾರಣದಿಂದಾಗಿ ತಮ್ಮ 25ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್ಗೆ ಹಠಾತ್ ನಿವೃತ್ತಿ ಘೋಷಿಸಿದ್ದಾರೆ.
2024ರ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ 2 ಏಕದಿನ ಮತ್ತು 2 ಟಿ20 ಪಂದ್ಯಗಳನ್ನು ಆಡಿ 3 ವಿಕೆಟ್ ಪಡೆದಿದ್ದ ಟರ್ನರ್, ಕಳೆದ ಒಂದು ವರ್ಷದಿಂದ ಆಟದಿಂದ ಹೊರಗುಳಿದಿದ್ದರು.
ಹ್ಯಾಂಪ್ಶೈರ್ ತಂಡದ ಪರ 5 ವರ್ಷಗಳ ಕಾಲ ಆಡಿದ ಟರ್ನರ್, ಕೇವಲ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ನಂತರ ಈ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.