
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆದ 10ನೇ ಆವೃತ್ತಿಯ ದೀಪೋತ್ಸವದಲ್ಲಿ ಸರಯೂ ನದಿಯ 56 ಘಾಟ್‌ಗಳಲ್ಲಿ 30 ಲಕ್ಷಕ್ಕೂ ಹೆಚ್ಚು ಮಣ್ಣಿನ ದೀಪಗಳನ್ನು ಬೆಳಗಿಸಿ ವಿಶ್ವದಾಖಲೆ ನಿರ್ಮಿಸಲಾಗಿದೆ.
ಡಾ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಎನ್‌ಸಿಸಿ ಸ್ವಯಂಸೇವಕರು ಸೇರಿದಂತೆ 35,000ಕ್ಕೂ ಹೆಚ್ಚು ಜನರು ಈ ದೀಪಗಳನ್ನು ಏಕಕಾಲದಲ್ಲಿ ಬೆಳಗುವ ಕಾರ್ಯದಲ್ಲಿ ಪಾಲ್ಗೊಂಡರು.
ದೀಪಾವಳಿ ಹಬ್ಬದ ಮುನ್ನಾದಿನ ನಡೆದ ಈ ಬೃಹತ್ ಕಾರ್ಯಕ್ರಮದಲ್ಲಿ 2,151 ವೇದಾಚಾರ್ಯರು ಮತ್ತು ಪೂಜಾರಿಗಳು ಏಕಕಾಲದಲ್ಲಿ ಭವ್ಯ 'ಸರಯೂ ಮಹಾ ಆರತಿ' ನೆರವೇರಿಸಿದರು.