
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಮೆಲ್ಘಾಟ್ ಪ್ರದೇಶದ ಸರ್ಕಾರಿ ಆಶ್ರಮ ಶಾಲೆಯ 16 ವಿದ್ಯಾರ್ಥಿನಿಯರು ಇದ್ದಕ್ಕಿದ್ದಂತೆ ನಗುವ ಮತ್ತು ಅಳುವ ವಿಚಿತ್ರ ವರ್ತನೆ ತೋರಿದ್ದು, ಪೋಷಕರಲ್ಲಿ ಆತಂಕ ಮೂಡಿಸಿದೆ.
ಶಾಲಾ ಆವರಣದಲ್ಲಿ ಪ್ರೇತ ಬಾಧೆ ಇದೆ ಎಂಬ ವದಂತಿಗೆ ಹೆದರಿ ಡೋಮಾ ಗ್ರಾಮದ ಈ ಶಾಲೆಯ ಕನಿಷ್ಠ 608 ವಿದ್ಯಾರ್ಥಿಗಳು ತರಗತಿಗಳನ್ನು ತೊರೆದು ತಮ್ಮ ಮನೆಗಳಿಗೆ ವಾಪಾಸಾಗಿದ್ದಾರೆ.
ಜಿಲ್ಲಾ ಉಪ ಆರೋಗ್ಯ ಅಧಿಕಾರಿ ಡಾ. ಅಭಿಷೇಕ್ ನಾಯ್ಡು ಅವರು ಇದನ್ನು ಒತ್ತಡದಿಂದ ಉಂಟಾಗುವ 'ಮಾಸ್ ಸೈಕಾಲಜಿಕಲ್ ಇಲ್ನೆಸ್' ಎಂದು ಕರೆದಿದ್ದು, ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ನೀಡಲು ಮೂಢನಂಬಿಕೆ ವಿರೋಧಿ ಸಮಿತಿ ಭೇಟಿ ನೀಡಿದೆ.