
ಪಾಕಿಸ್ತಾನವು 750 ಕಿ.ಮೀ ವ್ಯಾಪ್ತಿಯ ವಾಯುಪ್ರದೇಶವನ್ನು ನಿರ್ಬಂಧಿಸಿದ್ದು, ಇದು ತನ್ನ ಫತಾಹ್ ಸರಣಿಯ ದೀರ್ಘ-ಶ್ರೇಣಿಯ ಕ್ಷಿಪಣಿ ಅಥವಾ ಗೈಡೆಡ್ ರಾಕೆಟ್ ವ್ಯವಸ್ಥೆಯನ್ನು ಪರೀಕ್ಷಿಸುವ ಸೂಚನೆಯಾಗಿದೆ.
ರಕ್ಷಣಾ ವಿಶ್ಲೇಷಕರ ಪ್ರಕಾರ, ಪಾಕ್ ಸೇನೆಯು ಫತಾಹ್-3 ಅಥವಾ ಫತಾಹ್-4 ಆವೃತ್ತಿಯನ್ನು ಪರೀಕ್ಷಿಸುವ ಸಾಧ್ಯತೆಯಿದ್ದು, ಭಾರತೀಯ ವಾಯುಪಡೆ ಮತ್ತು ಗುಪ್ತಚರ ರೇಡಾರ್‌ಗಳು ಈ ಚಲನವಲನಗಳ ಮೇಲೆ ನಿಗಾ ಇರಿಸಿವೆ.
ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರ ಕಾಶ್ಮೀರ ಕುರಿತ ಹೇಳಿಕೆಗೆ ಪಾಕಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ನಡುವೆಯೇ ಈ ಬೃಹತ್ ವಾಯುಪ್ರದೇಶ ನಿರ್ಬಂಧ ಜಾರಿಗೆ ಬಂದಿದೆ.