Health & Environment
ಗುಜರಾತ್ ಪ್ರವಾಹದಲ್ಲಿ ಗಾಯಗೊಂಡ ಆನೆಗೆ ಏರ್‌ಲಿಫ್ಟ್ ಮೂಲಕ ಚಿಕಿತ್ಸೆ

ಗುಜರಾತ್ ಪ್ರವಾಹದಲ್ಲಿ ಗಾಯಗೊಂಡ ಆನೆಗೆ ಏರ್‌ಲಿಫ್ಟ್ ಮೂಲಕ ಚಿಕಿತ್ಸೆ

prajavani2h
THE BRIEF
1

ಜುಲೈನಲ್ಲಿ ನಾಗಾಲ್ಯಾಂಡ್ ಪ್ರವಾಹದಲ್ಲಿ ಕೊಚ್ಚಿ ಹೋಗಿ ಗಂಭೀರವಾಗಿ ಗಾಯಗೊಂಡಿದ್ದ 53 ವರ್ಷದ 'ಜೋಯ್ ಮೋತಿ' ಎಂಬ ಹೆಣ್ಣಾನೆಯನ್ನು ತುರ್ತು ಚಿಕಿತ್ಸೆಗಾಗಿ ಗುಜರಾತ್‌ನ ಜಾಮ್‌ನಗರದ ವಂತಾರಾ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗುತ್ತಿದೆ.

2

ಆನೆಯ ಹಣೆಯ ಭಾಗ, ಬಲ ಕಿವಿ, ಬಾಲ ಮತ್ತು ಕಾಲುಗಳಲ್ಲಿ ಗಂಭೀರ ಗಾಯಗಳಾಗಿದ್ದು, ಬಲ ಕಣ್ಣಿನ ದೃಷ್ಟಿ ಶಾಶ್ವತವಾಗಿ ಕಳೆದುಕೊಂಡಿದೆ, ರಸ್ತೆ ಮಾರ್ಗದ ಪ್ರಯಾಣವು ಆನೆಯ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ.

3

ದೇಶದ ಇತಿಹಾಸದಲ್ಲೇ ಚಿಕಿತ್ಸೆಗಾಗಿ ಆನೆಯನ್ನು ಏರ್‌ಲಿಫ್ಟ್ ಮಾಡುತ್ತಿರುವುದು ಇದೇ ಮೊದಲಾಗಿದ್ದು, ಚಿಕಿತ್ಸೆಯ ನಂತರ ಆನೆಗೆ ವಂತಾರಾದಲ್ಲಿ ಸುರಕ್ಷಿತ ಜೀವನ ನಡೆಸಲು ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.