
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಅಕ್ಟೋಬರ್ 17ರಿಂದ 22ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
ಮುಂಬೈ ಹಾಗೂ ಗುಜರಾತ್ನ ಜಾಮ್ನಗರಕ್ಕೆ ತೆರಳುವ ಅವರು ಉನ್ನತ ಅಧಿಕಾರಿಗಳು ಮತ್ತು ಉದ್ಯಮ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಕಾರ್ಯತಂತ್ರದ ಮೈತ್ರಿ, ಇಂಧನ ಸಹಕಾರ, ಕಚ್ಚಾ ತೈಲ ಪೂರೈಕೆ ಹಾಗೂ ವ್ಯಾಪಾರ ಒಪ್ಪಂದಗಳ ಕುರಿತು ಈ ಭೇಟಿಯಲ್ಲಿ ಚರ್ಚೆ ನಡೆಯಲಿದೆ.