Economy
ದೀಪಾವಳಿ ಹಿನ್ನೆಲೆ ಅಮುಲ್ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಳ

ದೀಪಾವಳಿ ಹಿನ್ನೆಲೆ ಅಮುಲ್ ಹಾಲಿನ ದರ ಲೀಟರ್‌ಗೆ 2 ರೂ. ಹೆಚ್ಚಳ

tv9kannada2h
THE BRIEF
1

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಮುಲ್ ಸಂಸ್ಥೆಯು ಹಾಲು, ತುಪ್ಪ ಹಾಗೂ ಬೆಣ್ಣೆ ದರವನ್ನು ಹೆಚ್ಚಿಸಿದೆ.

2

ಅಮುಲ್ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಿಸಲಾಗಿದೆ ಹಾಗೂ 1 ಕೆ.ಜಿ ತುಪ್ಪದ ಪ್ಯಾಕೆಟ್ ದರವನ್ನು 630 ರೂ.ದಿಂದ 680 ರೂ.ಗೆ ಏರಿಕೆ ಮಾಡಲಾಗಿದೆ.

3

ಜೊತೆಗೆ, 500 ಗ್ರಾಂ ತುಪ್ಪದ ಪ್ಯಾಕೆಟ್ ದರ 325 ರೂ.ದಿಂದ 345 ರೂ.ಗೆ ಹಾಗೂ 500 ಗ್ರಾಂ ಬೆಣ್ಣೆ ಪ್ಯಾಕೆಟ್ ದರ 310 ರೂ.ದಿಂದ 325 ರೂ.ಗೆ ಹೆಚ್ಚಳವಾಗಿದೆ.