
ಝಡ್ ಶ್ರೇಣಿಯ ಭದ್ರತೆ ಹೊಂದಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರಿಗೆ ಸೆಪ್ಟೆಂಬರ್ 1ರಂದು ಅನಾಮಧೇಯ ಪತ್ರದ ಮೂಲಕ ಕೊಲೆ ಬೆದರಿಕೆ ಬಂದಿದೆ.
ಪತ್ರದಲ್ಲಿ ತೀವ್ರಗಾಮಿ ಉಗ್ರರು ನಿಮ್ಮನ್ನು ಕೊಲೆ ಮಾಡುತ್ತಾರೆ ಎಂದು ಬರೆಯಲಾಗಿದ್ದು, ಇದರಲ್ಲಿ 2 ಮೊಬೈಲ್ ಸಂಖ್ಯೆಗಳನ್ನು ಉಲ್ಲೇಖಿಸಲಾಗಿದೆ.
ಸಚಿವರ ಕಚೇರಿಯು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದು, ಬೆದರಿಕೆಯ ಸತ್ಯಾಸತ್ಯತೆ ತನಿಖೆ ನಡೆಸಲು ಮತ್ತು ಭದ್ರತೆಯನ್ನು ಮರುಪರಿಶೀಲಿಸಲು ಆಗ್ರಹಿಸಿದೆ.