
ಕಡೂರು ತಾಲೂಕಿನ ಐತಿಹಾಸಿಕ ಬೀರೂರಿನ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಕಾರಣಿಕೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದೆ.
ದೇವಾಲಯದ ಪ್ರಧಾನ ಅರ್ಚಕ ದಶರಥ ಪೂಜಾರ್ ಅವರು ಈ ವರ್ಷದ ಕಾರ್ಣಿಕ ನುಡಿಯನ್ನು ಭಕ್ತರ ಸಮಕ್ಷಮದಲ್ಲಿ ವಾಚಿಸಿದ್ದಾರೆ.
ಈ ದೈವವಾಣಿಯನ್ನು ದೇಶ ಹಾಗೂ ರಾಜ್ಯದ ಭವಿಷ್ಯ ಹಾಗೂ ಮಳೆ-ಬೆಳೆಯ ಸೂಚನೆಯಾಗಿ ಭಕ್ತರು ನಂಬುತ್ತಾರೆ.