
ನಂದಿಕೂರ ಗ್ರಾಮದಲ್ಲಿ ಎಸ್ಟಿಪಿ ಘಟಕ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಂಡ ರೈತನಿಗೆ ₹ 8 ಕೋಟಿ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ, ನ್ಯಾಯಾಲಯದ ಆದೇಶದಂತೆ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಮೂರು ಕಾರುಗಳನ್ನು ಜಪ್ತಿ ಮಾಡಲಾಗಿದೆ.
2009ರಲ್ಲಿ ರೈತ ಪ್ರಕಾಶ ಮಲಕಪ್ಪ ಅವರ 2 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದ್ದು, 2018ರಲ್ಲಿ ನ್ಯಾಯಾಲಯವು ₹ 8 ಕೋಟಿ ಪರಿಹಾರ ನೀಡಲು ಆದೇಶಿಸಿದ್ದರೂ ಜಿಲ್ಲಾಡಳಿತ ಕೇವಲ ₹ 10 ಲಕ್ಷ ಮಾತ್ರ ಪಾವತಿಸಿತ್ತು.
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಸಭೆ ನಡೆಸುತ್ತಿದ್ದಾಗಲೇ ನ್ಯಾಯಾಲಯದ ಸಿಬ್ಬಂದಿ ಕಾರುಗಳನ್ನು ಜಪ್ತಿ ಮಾಡಿದ್ದು, ಸರ್ಕಾರಿ ವಕೀಲರು ಮಂಗಳವಾರ ಕಾರು ಬಿಡುಗಡೆಗೆ ಕೋರಿಕೆ ಸಲ್ಲಿಸಲಿದ್ದಾರೆ.