
ಬೀದರ್ ಜಿಲ್ಲೆಯ ಇಸ್ಲಾಂಪುರ ತಾಂಡಾದ 30 ಮನೆಗಳ 200ಕ್ಕೂ ಹೆಚ್ಚು ನಿವಾಸಿಗಳು ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.
ತಾಂಡಾದಿಂದ ಕೇವಲ ಅರ್ಧ ಕಿಲೋಮೀಟರ್ ದೂರದಲ್ಲಿ ಮಾಂಜ್ರಾ ನದಿ ಹರಿಯುತ್ತಿದ್ದರೂ, ಇಲ್ಲಿನ ಬೋರ್‌ವೆಲ್ ಒಂದು ತಿಂಗಳಿನಿಂದ ಕೆಟ್ಟು ನಿಂತಿದೆ.
ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿಗಳ ವ್ಯವಸ್ಥೆ ಇದ್ದರೂ ನೀರು ಪೂರೈಕೆಯಾಗುತ್ತಿಲ್ಲ, ಈ ಬಗ್ಗೆ ಪಿಡಿಒಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.