
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಆರೋಪದ ವಿರುದ್ಧ ಬಿಜೆಪಿ ರಾಯಚೂರಿನ ಲಿಂಗಸೂರಿನಿಂದ ಬಳ್ಳಾರಿ ಚಲೋ ಪಾದಯಾತ್ರೆಯನ್ನು ಸೆಪ್ಟೆಂಬರ್ 1ರಂದು ಆರಂಭಿಸಿದೆ.
ಪಾದಯಾತ್ರೆಯ ಮೊದಲ ದಿನವಾದ ಇಂದು ಬಿಜೆಪಿ ನಾಯಕರು 12 ಕಿ.ಮೀ. ದೂರ ಕ್ರಮಿಸಿದ್ದು, ಸಂತೆಕಲ್ಲೂರಿನ ಘನಮಠೇಶ್ವರ ಮಠದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಸೆಪ್ಟೆಂಬರ್ 10ರಂದು ಬಳ್ಳಾರಿಯಲ್ಲಿ ಸಮಾರೋಪಗೊಳ್ಳಲಿರುವ ಈ ಪಾದಯಾತ್ರೆಯ ಮೂಲಕ ಬರ ಪರಿಹಾರ ಮತ್ತು ಎಸ್‌ಸಿ, ಎಸ್‌ಟಿ ಮೀಸಲಾತಿ ವಿಚಾರದಲ್ಲಿ ಸರ್ಕಾರವನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.