
ಐಚಿ-ನಗೋಯಾ ಏಷ್ಯನ್ ಕ್ರೀಡಾಕೂಟದ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಮಲ್ಜೀತ್ ಮತ್ತು ಸುರುಚಿ ಇಂದರ್ ಸಿಂಗ್ ಜೋಡಿ ಚಿನ್ನದ ಪದಕ ಗೆದ್ದುಕೊಂಡಿದೆ.
ಅರ್ಹತಾ ಸುತ್ತಿನಲ್ಲಿ 587 ಅಂಕ ಗಳಿಸಿದ್ದ ಈ ಜೋಡಿ, ಫೈನಲ್ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಪೈಪೋಟಿ ನಡೆಸಿ 484.6 ಅಂಕಗಳೊಂದಿಗೆ ಹೊಸ ಏಷ್ಯನ್ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರು.
ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ನೀರಜ್ ಕುಮಾರ್ ಮತ್ತು ರುದ್ರಾಕ್ಷ ಪಾಟೀಲ್ ತಂಡವು 1762 ಅಂಕಗಳೊಂದಿಗೆ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.