
ರಾಷ್ಟ್ರೀಯ ಔಷಧ ಬೆಲೆ ನಿಗದಿ ಪ್ರಾಧಿಕಾರವು 543 ಬ್ರ್ಯಾಂಡ್‌ಗಳ ಕ್ಯಾನ್ಸರ್ ಸಂಬಂಧಿತ ಔಷಧಗಳ ಪರಿಷ್ಕೃತ ಗರಿಷ್ಠ ಚಿಲ್ಲರೆ ಬೆಲೆ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ನವೆಂಬರ್ 9ರಿಂದ ಜಾರಿಗೆ ಬರಲಿದೆ.
137 ಆಯ್ದ ಕ್ಯಾನ್ಸರ್ ವಿರೋಧಿ ಔಷಧಗಳ ವ್ಯಾಪಾರ ಅಂಚನ್ನು ಜಿಎಸ್‌ಟಿ ಹೊರತುಪಡಿಸಿ ಶೇ. 30ಕ್ಕೆ ಮಿತಿಗೊಳಿಸಲಾಗಿದ್ದು, ಇದರಿಂದ ಕೆಲವು ದರಗಳು ಶೇ. 70ರವರೆಗೆ ಇಳಿಯುವ ನಿರೀಕ್ಷೆಯಿದೆ.
ಆದರೆ 543 ಬ್ರ್ಯಾಂಡ್‌ಗಳ ಪೈಕಿ 146 ಔಷಧಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ವರದಿಯಾಗಿದೆ.