
ತಮ್ಮ ಸಿನಿಮಾಗಳನ್ನು ಪ್ರೊಪಗಾಂಡಾ ಎಂದು ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ 'ಸಂಘಿ' ಎಂದು ಕರೆದ ಟ್ರೋಲಿಗರಿಗೆ ನಟ ಆರ್. ಮಾಧವನ್ ಖಡಕ್ ಉತ್ತರ ನೀಡಿದ್ದಾರೆ.
ತಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರಲ್ಲ ಮತ್ತು ಬಾಲ್ಯದಿಂದಲೂ ದೇಶವನ್ನು ಪ್ರೀತಿಸುವುದನ್ನು ಕಲಿತಿದ್ದೇನೆ ಎಂದು ಜಿಡಿ ನಾಯ್ಡು ಬಯೋಪಿಕ್ ಪ್ರಚಾರದ ವೇಳೆ ಮಾಧವನ್ ಸ್ಪಷ್ಟಪಡಿಸಿದ್ದಾರೆ.
ಧುರಂಧರ್ ಚಿತ್ರವು ಪಾಕಿಸ್ತಾನದ ಹಿನ್ನೆಲೆಯಲ್ಲಿ ನಡೆಯುವ ಕಥೆಯಾಗಿದ್ದು, ಅದರಲ್ಲಿ ಪ್ರೊಪಗಾಂಡಾ ಇಲ್ಲ ಎಂದು ಹೇಳಿರುವ ಅವರು, ಆನ್‌ಲೈನ್ ಟೀಕೆಗಳು ತಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಲ್ಲ ಎಂದಿದ್ದಾರೆ.